ಕನ್ನಡ ಜನತೆಗೆ ಬೌದ್ಧಿಕ ಬೆಳವಣಿಗೆಗಾಗಿ 1985ರಲ್ಲಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ‘ಶೃಂಗಾರ ಪ್ರಕಾಶನ’ ಸಂಸ್ಥೆ ಸ್ಥಾಪನೆಯಾಯಿತು.
ಗ್ರಾಮೀಣ ಪ್ರದೇಶವೊಂದರಲ್ಲಿ ಸ್ಥಾಪನೆಗೊಂಡ ಈ ಪ್ರಕಾಶನ ಸಂಸ್ಥೆ ಕನ್ನಡ ಓದುಗರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಿಗೆ ಸಂಬಂಧಿಸಿದಂತೆ
ಪುಸ್ತಕಗಳನ್ನು ಹೊರತರುವಲ್ಲಿ ದಾಪುಗಾಲು ಹಾಕುತ್ತಾ ಮುನ್ನಡೆಯುತ್ತಿದೆ. ಬೆಳ್ಳಿಹಬ್ಬ ಆಚರಿಸುತ್ತಿರುವ ಈ ಸಂಸ್ಥೆ ಪ್ರಕಾಶನ ಕ್ಷೇತ್ರದಲ್ಲಿ ಅದ್ಭುತ ಯಶಸ್ಸುಗಳಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ವಿಜ್ಞಾನ, ಇತಿಹಾಸ, ಕಾದಂಬರಿ, ಕಥೆ, ಕಾವ್ಯ, ಜೀವನಚರಿತ್ರೆ ಇತ್ಯಾದಿ ಅಪರೂಪದ ಪುಸ್ತಕಗಳನ್ನು ನಾಡಿನ ಹಿರಿಯ ಕಿರಿಯ ಲೇಖಕರಿಂದ, ವಿದ್ವಾಂಸರಿಂದ ಬರೆಸಿ ಪ್ರಕಟಿಸಿ ವ್ಯವಸ್ಥಿತವಾಗಿ ಮಾರಾಟ ಮಾಡಿದೆ.
ವಿದ್ಯಾರ್ಥಿಗಳಿಗಾಗಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ವ್ಯಾಕರಣ, ಪ್ರಬಂಧ, ಪತ್ರಲೇಖನ, ತತ್ಸಮ-ತದ್ಭವ ಕೋಶ ಇತ್ಯಾದಿ ಉಪಯುಕ್ತ ಪುಸ್ತಕಗಳನ್ನು ಹೊರತಂದಿದ್ದು ಸಾವಿರಾರು ವಿದ್ಯಾರ್ಥಿಗಳು,
ಅಧ್ಯಾಪಕರು ಇದರ ಪ್ರಯೋಜನವನ್ನು ಪಡೆದಿದ್ದಾರೆ. ಮಕ್ಕಳಿಗಾಗಿ ರಾಮಯಣ, ಮಹಾಭಾರತ, ಪಂಚತಂತ್ರ, ರಾಬಿನ್‍ಹುಡ್ ಸಾಹಸಗಳು, ಶ್ರೀ ಕೃಷ್ಣಲೀಲೆ ಮುಂತಾದ ಸಚಿತ್ರ ಪುಸ್ತಕಗಳನ್ನು ಹೊರತರಲಾಗಿದೆ.
ಜನಪದ ಕಥೆಗಳು, ಆದರ್ಶ ಪ್ರಸಂಗಗಳು, ಪ್ರೇರಣಾ ಪ್ರಸಂಗಗಳು ಶೃಂಗಾರ ಪ್ರಕಾಶನದ ಹೆಮ್ಮೆಯ ಪ್ರಕಟನೆಗಳು. ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಂಸ್ಥೆ ಇದುವರೆಗೆ 352 ಶೀರ್ಷಿಕೆಗಳಲ್ಲಿ ಪುಸ್ತಕಗಳನ್ನು
ಪ್ರಕಟಿಸಿ ಪ್ರಕಾಶನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇದು ಗ್ರಾಮಾಂತರ ಪ್ರದೇಶದ ಸಂಸ್ಥೆಯೊಂದರ ದೊಡ್ಡ ಸಾಧನೆ ಎನಿಸಿದೆ.
ಸಂಸ್ಥೆಯ ದಶವಾರ್ಷಿಕ ಸಮಾರಂಭದಲ್ಲಿ ನಾಡಿನ ಹಿರಿಯ ಪ್ರಕಾಶಕರಿಗೆ ಸನ್ಮಾನ, ಗೌರವ ನೀಡಿ ಸತ್ಕರಿಸಲಾಗಿದೆ. ಶೃಂಗಾರ ಪ್ರಕಾಶನದ ಪ್ರಕಟಣೆ ಮಹಾಭಾರತ 1 ರಿಂದ 12 ಸಂಪುಟಗಳಿಗೆ ಕನ್ನಡ ಪುಸ್ತಕ
ಪ್ರಾಧಿಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ ಮತ್ತು ನಗದು ಬಹುಮಾನ ಲಭಿಸಿದೆ. ಶೃಂಗಾರ ಪ್ರಕಾಶನದಲ್ಲಿ ಪ್ರಕಟವಾದ ಆಚಾರ್ಯ ತೀನಂಶ್ರೀ ಅವರ ನಂಟರು ಮತ್ತು ಆಯ್ದ ವಿಮರ್ಶಾ ಲೇಖನಗಳು ಹಾಗೂ
ಹಿರಿಯ ಸಾಹಿತಿ ಆರ್.ಬಸವರಾಜ್ ಅವರ ಸಣ್ಣಕಥೆಗಳು-ಪುಸ್ತಕಗಳು ಕ್ರಮವಾಗಿ ಬೆಂಗಳೂರು, ಕುವೆಂಪು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಇದು ನಿಜಕ್ಕೂ ಸಂತಸದ ಸಂಗತಿ.
ಪ್ರಕಾಶನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದಕ್ಕೆ ಬೇರೆ ಬೇರೆ ಪ್ರಾಜೆಕ್ಟ್‍ಗಳನ್ನು ಸಿದ್ಧಗೊಳಿಸಲು ಅನುಕೂಲವಾಗುವಂತೆ ವರ್ಣರಂಜಿತ,
ಇಂಗ್ಲೀಷ್ ಮತ್ತು ಕನ್ನಡದಲ್ಲಿ ಮಹಿತಿಯಿರುವ ವಿಶೇಷ ಚಾರ್ಟುಗಳನ್ನು ಸಿದ್ಧಪಡಿಸಿ ಕರ್ನಾಟಕದಾದ್ಯಂತ ಮಾರಾಟದ ಜಾಲವನ್ನು ವಿಸ್ತರಿಸಿದೆ.
ಈ ವಿಭಿನ್ನ ಬಗೆಯ ಚಾರ್ಟುಗಳಲ್ಲಿ ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ ಪುರಸ್ಕøತರು, ಕನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷರು, ಭಾರತದಲ್ಲಿ ನೋಬಲ್ ಪ್ರಶಸ್ತಿ ಪಡೆದವರು, ಪ್ರಸಿದ್ಧ ಸಾಹಿತಿಗಳು,
ದೇಶ-ವಿದೇಶಗಳ ವಿಜ್ಞಾನಿಗಳು, ರಾಷ್ಟ್ರನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ವಚನಕಾರರು, ಸಂತರು, ದಾಸವರೇಣ್ಯರು, ಮಹಾಪುರುಷರು, ಲೇಖಕಿಯರು, ಪಶು-ಪಕ್ಷಿಗಳು ಹೀಗೆ ಕಲೆ,
ವಿಜ್ಞಾನ, ಸಂಗೀತ, ಕ್ರೀಡೆ, ಯೋಗಾಸನಗಳು, ಪ್ರವಾಸಿಸ್ಥಳಗಳು, ದೇವಾಲಯಗಳು ಮುಂತಾದ ವಿವಿಧ ವಸ್ತುಗಳಿರುವುದು ಈ ಸಂಸ್ಥೆಯ ಒಂದು ಹೆಗ್ಗಳಿಕೆಯಾಗಿದೆ. ಇದರ ಜೊತೆಗೆ ವಿದ್ಯಾರ್ಥಿಗಳು
ಮತ್ತು ಅಧ್ಯಾಪಕರಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ಅತ್ಯಂತ ಉಪಯುಕ್ತ ಎನಿಸುವ ಇಡೀ ಕನ್ನಡ ವ್ಯಾಕರಣವನ್ನು ಸಂಕ್ಷಿಪ್ತವಾಗಿ ಪ್ರಸ್ತುತ ಪಡಿಸುವ ವ್ಯಾಕರಣ ಚಾರ್ಟುಗಳು ಈ ಪ್ರಕಾಶನಕ್ಕೆ ಜನಪ್ರಿಯತೆಯನ್ನು
ತಂದುಕೊಟ್ಟಿದೆ. ಸುಲಭ ದರದಲ್ಲಿ ವಿಭಿನ್ನ ಬಗೆಯ ಚಾರ್ಟುಗಳು 9” ಥ 11” ಅಳತೆಯಲ್ಲಿ, 12” ಥ 18” ಅಳತೆಯಲ್ಲಿ ಹಾಗೂ 20” ಥ 30” ಅಳತೆಯಲ್ಲಿ ಬಹುವರ್ಣ ಮುದ್ರಣ ಹಾಗೂ
ಲ್ಯಾಮಿನೇಷನ್‍ನೊಂದಿಗೆ ಪ್ರಕಾಶನ ಸಂಸ್ಥೆ ನೀಡುತ್ತಿದ್ದು ಇಡೀ ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ.